ನಮ್ಮ ಬಗ್ಗೆ

ಜಿ. ಎನ್. ಶ್ರೀನಿವಾಸಗೌಡರು
ರಾಜ್ಯಾಧ್ಯಕ್ಷರು
01/03/2020 ರಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೈನ್ಯ (ರಿ ) ಸಂಘಟನೆ ನೋಂದಣಿ ದಿನಾಂಕ. ನಾಡು, ನುಡಿ, ಗಡಿ, ಭಾಷೆ, ವಿದ್ಯಾರ್ಥಿ, ಕಾರ್ಮಿಕ, ಮಹಿಳೆ, ಚಾಲಕ, ಬಡವರಿಗೆ ನೊಂದವರ ಪಾಲಿಗೆ ಸಿಂಹ ಸ್ವಪ್ನ ವಾಗಿ ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಾ ನನ್ನ ಬಾಲ್ಯ ಮತ್ತು ವಿದ್ಯಾರ್ಥಿ ಯಿಂದಲೂ ಸರಿ ಸುಮಾರು 25 ವರ್ಷಗಳಿಂದ ಸಾವಿರಾರು ಹೋರಾಟಗಳು ಮಾಡಲಾಗಿದೆ. ಮಾಡಿರುವ ಹೋರಾಟಗಳಲ್ಲಿ ಸಕ್ರಿಯವಾಗಿ ಯಾವುದೇ ಮುಲಾಜಿಗೆ ಅಂಜದೆ ಅಳುಕದೆ ಅಷ್ಟೂ ಹೋರಾಟಗಳಿಗೆ ಜಯ ಸಿಕ್ಕಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ವಾಗಿದೆ.
ನೊಂದು ಬೆಂದು ಅನ್ಯಾಯಾಕೊಳಗಾಗಿ ಸಂಘಟನೆಯ ಸಹಾಯ ಕೇಳಿ ಬಂದವರಿಗೆ ನಮ್ಮ ಸಂಘಟನೆ ಅವರ ಕಷ್ಟ ಕಾರ್ಪಣ್ಯಗಳಿಗೆ ದೃಢವಾಗಿ ಅವರಿಗೆ ಸಹಾಯ ಮಾಡಿರುವ ಹೆಗ್ಗಳಿಕೆ ಕರವೇ ಸಿಂಹ ಸೈನ್ಯ ಸಂಘಟನೆಯದ್ದು.
ಹಾಗೇನೇ ಅವರ ಕಷ್ಟ ಪರಿಹರಿಸಿ ಕೊಟ್ಟಾಗ ಅವರ ಅವರ ಆತ್ಮ ತೃಪ್ತಿ ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಭಾವಿಸುತ್ತೆವೆ.

ನಮ್ಮ ಸಂಘಟನೆಯ ಅಜೆಂಡಾ
ನಾಡು ನುಡಿ ಗಡಿ ರಕ್ಷಣೆ
ಕರ್ನಾಟಕದಲ್ಲಿ ಬಡತನ ನಿರ್ಮೂಲನೆ
ಸರ್ಕಾರದಿಂದ ಸಿಗುವ ಅನುದಾನಗಳು ಮದ್ಯವರ್ತಿಗಳ ಪಾಲಾಗದೆ ನೇರವಾಗಿ ಜನರಿಗೆ ಕೊಡಿಸುವುದು
ಸರ್ಕರಿ ಅಧಿಕಾರಿಗಳ ಲಂಚ ದೌರ್ಜನ್ಯ ತಡೆಗಟ್ಟುವುದು
ಸರ್ವರನ್ನು ಸಮಾನರನ್ನಾಗಿ ಕಾಣುವುದು
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
ನಮ್ಮ ಸಂಘಟನೆಯಿಂದ 1 ಕೋಟಿ ಸರಿ ನೆಡುವ ಅಭಿಯಾನ ಚಾಲ್ತಿಯಲ್ಲಿದೆ
ಇವರೆಗೂ 1 ಲಕ್ಷಕ್ಕೂ ಹೆಚ್ಚು ಸಸಿ ನೆಡಲಾಗಿದೆ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ

